ಸೂಪ್ ಒಂದು ಪೌಷ್ಟಿಕ ಹಾಗೂ ಸುಲಭವಾಗಿ ಜೀರ್ಣವಾಗುವ ದ್ರವಾಹಾರವಾಗಿದ್ದು, ಇದನ್ನು ಮಾಂಸ, ತರಕಾರಿ, ಕಾಳುಗಳು, ಮಸಾಲೆ ಮತ್ತು ಬೇಯಿಸಿದ ನೀರಿನ (ಸ್ಟಾಕ್)ನೊಂದಿಗೆ ತಯಾರಿಸಲಾಗುತ್ತದೆ. ಇವನ್ನು ಸಾಮಾನ್ಯವಾಗಿ ಭೋಜನದ ಆರಂಭದಲ್ಲಿ ಸೇವಿಸಲಾಗುತ್ತದೆ. ಬಿಸಿ ಅಥವಾ ತಣ್ಣನೆಯ ರೂಪದಲ್ಲಿ ದೊರೆಯುವ ಸೂಪಿಗೆ ವಿಭಿನ್ನ ರುಚಿ, ಗಂಧ ಮತ್ತು ಪೌಷ್ಟಿಕಾಂಶ ಇರುವ ಹಲವು ತಯಾರಿಕಾ ವಿಧಾನಗಳಿವೆ. ವಿವಿಧ ರೀತಿಯ ಸೂಪುಗಳು ಹಳ್ಳಿಗಳಿಂದ ಮಹಾನಗರಗಳವರೆಗೆ ಜನಪ್ರಿಯವಾಗಿವೆ. ಇಲ್ಲಿವೆ ನಿಮಗಾಗಿ ಶಕ್ತಿವರ್ಧಕ ಸೂಪ್ ತಯಾರಿಸುವ ವಿಧಾನ..
ಕಡಲೆಬೀಜ ಸಾಂಬಾರ್ ಸೂಪ್
ಪದಾರ್ಥಗಳು
1/2 ಕಪ್ ಬೇಯಿಸಿದ ಕಡಲೆಬೀಜ.
1 ಟೊಮೇಟೋ.
1/2 ಕಪ್ ಈರುಳ್ಳಿ.
1 ಚಮಚ ಸಾಂಬಾರ್ ಪುಡಿ.
1/4 ಟೀ ಚಮಚ ಹುಣಸೆಹಣ್ಣು ರಸ ( ಐಚ್ಛಿಕ)
1/4 ಟೀ ಚಮಚ ಜೀರಿಗೆ
1/4 ಟೀ ಚಮಚ ಮೆಣಸಿನ ಪುಡಿ
1 ಟೀ ಚಮಚ ಎಣ್ಣೆ ಅಥವಾ ತುಪ್ಪ
ಉಪ್ಪು – ರುಚಿಗೆ ತಕ್ಕಷ್ಟು
2 ಕಪ್ ನೀರು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
1. ಕಡಲೆಬೀಜ ಬೇಯಿಸಿ: ಕಡಲೆಬೀಜಗಳನ್ನು ಕುಕ್ಕರ್‌ನಲ್ಲಿ 2 ಸೀಟಿ ಬರುವ ತನಕ ಬೇಯಿಸಿರಿ.
2. ಬಾಣಲೆಗೆ: ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಜೀರಿಗೆ, ಬೆಳ್ಳುಳ್ಳಿ, ಬೆಳ್ಳುಳ್ಳಿಯ ನಂತರ ಟೊಮೇಟೋ ಹಾಕಿ 2 ನಿಮಿಷ ಬೇಯಿಸಿ.
3. ಸಾಂಬಾರ್ ಪುಡಿ ಸೇರಿಸಿ: ಸಾಂಬಾರ್ ಪುಡಿ, ಮೆಣಸಿನಪುಡಿ, ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿ.
4. ಕಡಲೆಬೀಜ ಸೇರಿಸಿ: ಬೇಯಿಸಿದ ಕಡಲೆಬೀಜ, ಉಪ್ಪು, ಮತ್ತಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ.
5. ಇಷ್ಟವಿದ್ದರೆ ಸ್ವಲ್ಪ ಹುಣಸೆಹಣ್ಣು ರಸ ಸೇರಿಸಿ.
6. ಕೊತ್ತಂಬರಿ ಸೊಪ್ಪು ಹಾಕಿ ತಂಪಾಗಿ ಅಥವಾ ಬೆಚ್ಚಗಿನಂತೆ ಸೇವಿಸಿ.
ಉಪಯೋಗಗಳು
- ಹೆಚ್ಚು ಶಕ್ತಿ – ಕಡಲೆಬೀಜಯಲ್ಲಿ ಪ್ರೋಟೀನ್ ಮತ್ತು ಹೆಚ್ಚು ಶಕ್ತಿ ವರ್ಧಕ ಆಗಿರುತ್ತದೆ.
- ಹೃದಯ ಆರೋಗ್ಯ – ಮ್ಯಾಂಗನೀಸ್, ಫೋಲೆಟ್, ಮತ್ತು ಗುಡ್ ಫ್ಯಾಟ್‌ಗಳಿಂದ ಸಮೃದ್ಧ.
- ರೋಗ ನಿರೋಧಕ ಶಕ್ತಿ– ಸಾಂಬಾರ್ ಪುಡಿ ಮತ್ತು ಟೊಮೇಟೋ ಆಂಟಿಆಕ್ಸಿಡೆಂಟ್ ಹೊಂದಿದೆ.
- ಸಾತ್ವಿಕ ಮತ್ತು ತೂಕ ನಿಯಂತ್ರಣಕ್ಕೆ ಸಹಾಯಕ.
ಮಲ್ಟಿ ಮಿಲೆಟ್ ಸೂಪ್
ಪದಾರ್ಥಗಳು
2 ಟೇಬಲ್ ಚಮಚ ರಾಗಿ.
2 ಟೇಬಲ್ ಚಮಚ ಜೋಳ.
2 ಟೇಬಲ್ ಚಮಚ ಸಜ್ಜೆ
1/4 ಕಪ್ ಈರುಳ್ಳಿ
1 ಟೊಮೇಟೋ
1/2 ಟೀ ಚಮಚ ಶುಂಠಿ- ಬೆಳ್ಳುಳ್ಳಿ ಪೇಸ್ಟ್ (ಐಚ್ಛಿಕ)
1/2 ಟೀ ಚಮಚ ಜೀರಿಗೆ
1 ಟೀ ಚಮಚ ಎಣ್ಣೆ ಅಥವಾ ತುಪ್ಪ
ಉಪ್ಪು, ಮೆಣಸು ರುಚಿಗೆ ತಕ್ಕಷ್ಟು
3 ಕಪ್ ನೀರು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
1. ಬಾಣಲೆಗೆ: ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಜೀರಿಗೆ, ಹೆಚ್ಚಿದ ಈರುಳ್ಳಿ, ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ.
2. ಟೊಮೇಟೋ ಹಾಕಿ: ಟೊಮೇಟೋ ಹಾಕಿ ಅದು ಮೃದುವಾಗುವವರೆಗೆ ಬೇಯಿಸಿ.
3. ಮಿಲೆಟ್ ಮಿಶ್ರಣ: ಮಿಲೆಟ್ ಪುಡಿಗಳನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಗಂಟು ಆಗದಂತೆ ಮಿಶ್ರಣ ಮಾಡಿ.
4. ಸೂಪಿಗೆ ಸೇರಿಸಿ: ಈ ಮಿಶ್ರಣವನ್ನು ಬಾಣಲೆಗೆ ಸೇರಿಸಿ, 3 ಕಪ್ ನೀರು ಹಾಕಿ, ಉಪ್ಪು, ಮೆಣಸು ಹಾಕಿ 10 ನಿಮಿಷ ಕುದಿಸಿ.
5. ಅಂತಿಮ ಅಲಂಕರಣ: ಕೊತ್ತಂಬರಿ ಸೊಪ್ಪು ಚಿಕ್ಕದಾಗಿ ಹೆಚ್ಚಿ ಹಾಕಿ, ಬಿಸಿ ಬಿಸಿ ಸೇವಿಸಿ.
ಉಪಯೋಗಗಳು
- ಶಕ್ತಿ ವರ್ಧಕ: ಮಿಲೆಟ್ಗಳು ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಹೊಂದಿದ್ದು, ದೀರ್ಘ ಕಾಲ ಶಕ್ತಿಯನ್ನು ಕೊಡುತ್ತವೆ.
- ಹೆಚ್ಚು ಫೈಬರ್: ಜೀರ್ಣ ಸುಲಭವಾಗಿ ಆಗುತ್ತದೆ ಮತ್ತು ಹಸಿವು ಕಡಿಮೆ ಆಗುತ್ತದೆ.
- ಗ್ಲೂಟನ್ ಫ್ರೀ: ಗ್ಲೂಟನ್ ಅಲರ್ಜಿ ಇರುವವರಿಗೆ ಸೂಕ್ತ.
- ದೇಹ ತೂಕ ನಿಯಂತ್ರಣ: ಕಡಿಮೆ ಕ್ಯಾಲೊರಿಯ ಮಿಲೆಟ್‌ಗಳು ದೇಹ ತೂಕವನ್ನು ಜಾಸ್ತಿ ಆಗದಂತೆ ಸಹಾಯ ಮಾಡುತ್ತವೆ.
- ಆಹಾರ ಪಚನ ಕ್ರಿಯೆ ಸುಧಾರಣೆ: ಶುಂಠಿ, ಜೀರಿಗೆ ಸಹಾಯ ಮಾಡುತ್ತದೆ.
- ಇದನ್ನು ಹಸಿವಾಗಿರುವಾಗ ಅಥವಾ ಸಂಜೆ ಪಾನೀಯವಾಗಿ ಸೇವಿಸಬಹುದು.
----***-----***-------------------------------***----***---
ಹುರಿದ ಚಣದ ಸೂಪ್ (Putani Soup)
ಪದಾರ್ಥಗಳು :
1/2 ಕಪ್ ಹುರಿದ ಚಣ (ಪುಟಾಣಿ)
1 ಚಿಕ್ಕ ಈರುಳ್ಳಿ (ಅಥವಾ 2-3 ಸಣ್ಣ ಈರುಳ್ಳಿಗಳು), ಚೂರು ಮಾಡಿ
1 ಬೆಳ್ಳುಳ್ಳಿ (ಐಚ್ಛಿಕ)
1/2 ಇಂಚು ಶುಂಠಿ
1 ಟೀ ಚಮಚ ಜೀರಿಗೆ
1 ಟೀ ಚಮಚ ತುಪ್ಪ ಅಥವಾ ಎಣ್ಣೆ
ಉಪ್ಪು, ಮೆಣಸು ರುಚಿಗೆ ತಕ್ಕಷ್ಟು
2–2.5 ಕಪ್ ನೀರು
ಕೊತ್ತಂಬರಿ ಸೊಪ್ಪು
ಲಿಂಬೆ ರಸ (ಐಚ್ಛಿಕ)
ಮಾಡುವ ವಿಧಾನ :
1. ಪುಟಾಣಿ ಪೇಸ್ಟ್ ತಯಾರಿಸಿ:
ಮಿಕ್ಸಿಯಲ್ಲಿ ಹುರಿದ ಚಣವನ್ನು ಸ್ವಲ್ಪ ನೀರಿನೊಂದಿಗೆ ಮೃದುವಾಗಿ ಪೇಸ್ಟ್ ಮಾಡಬೇಕು.
2. ಬಾಣಲೆಗೆ: ಬಾಣಲೆಗೆ ತುಪ್ಪ ಹಾಕಿ, ಜೀರಿಗೆ, ಬೆಳ್ಳುಳಿ, ಶುಂಠಿ, ಈರುಳ್ಳಿಯನ್ನು ಹುರಿದುಬಿಡಿ.
3. ಮಿಶ್ರಣ ಸೇರಿಸಿ: ತಯಾರಿಸಿದ ಹುರಿದ ಚಣ ಪೇಸ್ಟ್ ಅನ್ನು ಸೇರಿಸಿ, ತದನಂತರ 2 ಕಪ್ ನೀರು ಸೇರಿಸಿ.
4. ಮಸಾಲೆ ಸೇರಿಸಿ: ಉಪ್ಪು, ಮೆಣಸಿನ ಪುಡಿ ಸೇರಿಸಿ. ಮಧ್ಯಮ ಉರಿಯಲ್ಲಿ 5–6 ನಿಮಿಷ ಕುದಿಸಿ.
5. ಅಂತಿಮ ಟಚ್: ಕೊತ್ತಂಬರಿ ಸೊಪ್ಪು, ಬೇಕಾದರೆ ಲಿಂಬೆ ರಸ ಸೇರಿಸಬಹುದು.
ಈ ಸೂಪನ್ನು ಬೆಳಗ್ಗೆ ಉಪಾಹಾರಕ್ಕೂ ಅಥವಾ ಸಂಜೆ ಪಾನೀಯವಾಗಿ ಸೇವಿಸಬಹುದು.
ಹುರಿದ ಚಣದ ಸೂಪಿನ ಉಪಯೋಗಗಳು
- ಪ್ರೋಟೀನ್ ಸಮೃದ್ಧ – ದೇಹದ ಮಾಂಸ ಖಂಡ ಬೆಳೆವಣಿಗೆಗೆ ಸಹಾಯವಾಗುತ್ತದೆ.
(ಇದು ವಿಶೇಷವಾಗಿ ಬಾಡಿಬಿಲ್ಡಿಂಗ್ ಅಥವಾ ಫಿಟ್ನೆಸ್ ಗುರಿಗಳನ್ನು ಹೊಂದಿರುವವರು ಅನುಸರಿಸುವ ರೀತಿಯಾಗಿದೆ.)
- ಇದರ ಹೈ ಫೈಬರ್ ಗುಣದಿಂದ ಜೀರ್ಣಕ್ಕೆ ಒಳ್ಳೆಯದು.
- ಶಕ್ತಿವರ್ಧಕ ಆಗಿರುವುದರಿಂದ ದಿನದ ಆರಂಭಕ್ಕೆ ಸೂಕ್ತ.
- ಕಡಿಮೆ ಕ್ಯಾಲೊರಿ ಇರುವುದರಿಂದ ತೂಕ ನಿಯಂತ್ರಣಕ್ಕೆ ಸಹಾಯ.
- ಗ್ಲೂಟನ್ ಫ್ರೀ ಇರುವುದರಿಂದ ಹೆಚ್ಚು ಮಂದಿಗೆ ಸೂಕ್ತ.
.jpeg)
.jpeg)
.jpeg)
.jpeg)
No comments:
Post a Comment