ಆಕ್ರೋಟ್ (ವಾಲ್ನಟ್) ಆರೋಗ್ಯಕ್ಕೆ ಬಹುಮುಖ್ಯವಾದುದು. ಇದು ಮೆದುಳಿಗೆ ಶಕ್ತಿ ನೀಡುತ್ತದೆ, ಹೃದಯ ಆರೋಗ್ಯವನ್ನೂ ರಕ್ಷಿಸುತ್ತದೆ, ಮತ್ತು ಚರ್ಮ ಹಾಗೂ ಕೂದಲಿಗೂ ಲಾಭಕಾರಿ.
ನಾವು ಮಕ್ಕಳಿಗೆ ಆರೋಗ್ಯದ ಬಗ್ಗೆ ತಿಳಿಸಬೇಕಾದಾಗ, ಅದು ನೇರವಾಗಿ ಹೇಳಿದರೆ ಅವು ಸ್ಪಷ್ಟವಾಗಿ ಗ್ರಹಿಸದಿರಬಹುದು. ಆದರೆ ಕಥೆಗಳ ಮೂಲಕ, ಅವರು ಕೌತುಕದಿಂದ ಕೇಳುತ್ತಾರೆ, ಕಲಿಯುತ್ತಾರೆ ಮತ್ತು ಆ ನಡವಳಿಕೆಯನ್ನು ಅಳವಡಿಸಿಕೊಳ್ಳುತ್ತಾರೆ. ಇಲ್ಲಿದೆ ಒಂದು ಸುಂದರವಾದ ಕಥೆ.
ಒಂದು ಹಳ್ಳಿಯಲ್ಲಿ ಚಿಂಕು ಎನ್ನುವ ಚಿಕ್ಕ ಹುಡುಗನು, ಪರೀಕ್ಷೆ ಮುಗಿಸಿ ತನ್ನ ಅಜ್ಜನ ಜೊತೆ ಜಾಗೃತಿಯ ಬಾಗಿಲು ಎನ್ನುತ್ತಿರುವ ಹಳೆಯ ಮನೆಗೆ ಬಂದ. ಅಲ್ಲಿ ಅವನಿಗೆ ಆಟ ಆಡಲು ತುಂಬಾ ಗೆಳೆಯರಿದ್ದಾರೆ.
ಅಜ್ಜಿ ಚಿಂಕುಗೆ ಇಷ್ಟವಾಗುವ ಕುರುಕಲು ತಿಂಡಿಗಳನ್ನು ಮಾಡಿಕೊಡುತ್ತಿದ್ದರು. ಅಜ್ಜನು ಚಿಂಕುಗೆ ತಿನ್ನಲು ಕೆಲವು ಆಕ್ರೋಟ್ಗಳನ್ನು ನೀಡಿದರು.
ಚಿಂಕು ಅದನ್ನು ನೋಡಿ ಆಶ್ಚರ್ಯಪಟ್ಟು, “ಅಜ್ಜಾ, ಈ ಕಲ್ಲಿನಂತೆ ಕಟು ಎನಿಸುವ ಬೀಜದ ಒಳಗೆ ಏನು ಇರಬಹುದು?” ಎನ್ನುತ್ತಾ ಕುತೂಹಲದಿಂದ ಕೇಳಿದ.
ಅಜ್ಜ ನಗುತ್ತ ಹೇಳಿದರು: “ಚಿಂಕು, ಜೀವನದಲ್ಲೂ ಹಾಗೆ. ಕೆಲವು ಸಂಗತಿಗಳು ಹೊರಗೆ ಕಠಿಣವಾಗಿದ್ದರೂ, ಒಳಗೆ ಅತಿ ಅಮೂಲ್ಯವಾಗಿರುತ್ತವೆ. ಈ ಆಕ್ರೊಟ್ ನೋಡಿ, ಅದರೊಳಗಿನ ಗರಿ ನಿನ್ನ ಮೆದುಳಿಗೆ ತೀವ್ರ ಬುದ್ಧಿ ನೀಡಬಹುದು.”
ಚಿಂಕು ಇನ್ನಷ್ಟು ಕೇಳಲು ಇಚ್ಛಿಸಿ ಕೇಳಿದ: “ಮೆದುಳಿಗೆ ಬುದ್ಧಿ ?? ಅದು ಹೇಗೆ ಅಜ್ಜಾ ? ವಿವರಿಸಿ ಹೇಳುವಿರಾ?” ಅಂಥ ಕೇಳುತ್ತಾನೆ..!
ಅಜ್ಜ ನಗುತ್ತ ವಿವರಿಸಿದರು: “ಆಕ್ರೋಟ್ಗಳಲ್ಲಿ ಓಮೆಗಾ-3 ಕೊಬ್ಬು ಆಮ್ಲಗಳು ಇವೆ, ಅದು ನಿನ್ನ ಮೆದುಳಿಗೆ ಉತ್ತಮ ಬಲ ನೀಡುತ್ತದೆ. ಇದನ್ನು ನಿತ್ಯ ಆಹಾರದಲ್ಲಿ ಸೇರಿಸಿದರೆ ನೆನಪು ಶಕ್ತಿ, ಏಕಾಗ್ರತೆ ಮತ್ತು ನಿದ್ದೆ ಕೂಡಾ ಸುಧಾರಿಸುತ್ತವೆ. ನಿನಗೆ ತಿಳಿದಿದೆಯಾ ಮಗು, ಎಷ್ಟೋ ವಿಜ್ಞಾನಿಗಳು ಪ್ರತೀ ನಿತ್ಯ ಒಂದಾದರೂ ಆಕ್ರೋಟ್ ತಿನ್ನುತ್ತಾರೆ!!! ಆ ಆಕ್ರೋಟ್ ನೋಡು ನಮ್ಮ ಮೆದುಳಿನ ಆಕಾರದಲ್ಲೇ ಇದೆ ಅಲ್ಲವೇ ಮಗೂ!!!
ಅಜ್ಜ ತಿಳಿಸಿರುವ ವಿಷಯ ಚಿಂಕೂಗೆ ತುಂಬಾ ಇಷ್ಟ ಆಗುತ್ತದೆ. ಆ ಕ್ಷಣದಿಂದ, ಚಿಂಕು ಒಂದು ಹವ್ಯಾಸವನ್ನು ಬೆಳೆಸಿಕೊಂಡನು. ಪ್ರತಿದಿನ ಬೆಳಿಗ್ಗೆ ಒಂದು ಆಕ್ರೋಟ್ ತಿನ್ನುವಂತೆ ಮಾಡಿಕೊಂಡ. ಸಮಯ ಕಳೆದಂತೆ ಅವನು ಪಾಠಗಳಲ್ಲಿ ಚೆನ್ನಾಗಿ ಉದ್ದೀಪನ ಪಡೆಯಲಾರಂಭಿಸಿದ. ಶಿಕ್ಷಕರು ಅವನ ಬುದ್ಧಿಯನ್ನು ಪ್ರಶಂಸಿಸುತ್ತಿದ್ದರು. ಎಲ್ಲೆಂದರಲ್ಲಿ ಚಿಂಕು “ಆಕ್ರೋಟ್ ಹುಡುಗ” ಎಂಬ ಹೆಸರಿನಿಂದ ಪ್ರಸಿದ್ಧನಾದ ಮತ್ತು ಇತರ ಮಕ್ಕಳೂ ಕೂಡ ಚಿಂಕುವನ್ನು ನೋಡಿ, ಆರೋಗ್ಯಕರ ಅಭ್ಯಾಸವನ್ನು ರೂಢಿಮಾಡಿಕೊಂಡರು..!!!

.jpeg)
.jpeg)
.jpeg)
.jpeg)
No comments:
Post a Comment