ಇಂದಿನ ತ್ವರಿತಗತಿಯ ಜೀವನಶೈಲಿಯಲ್ಲಿ ಒಬ್ಬ ವ್ಯಕ್ತಿ ಪ್ರತಿದಿನವೂ ಹಲವು ಮನೋಭಾರ ಮತ್ತು ಒತ್ತಡವನ್ನು ಅನುಭವಿಸುತ್ತಾನೆ. ಕೆಲಸದ ಒತ್ತಡ, ವೈಯಕ್ತಿಕ ಸಮಸ್ಯೆಗಳು, ಆರ್ಥಿಕ ತೊಂದರೆಗಳು, ಸಂಬಂಧದ ಕಲಹಗಳು, ಮತ್ತು ಸಾಮಾಜಿಕ ಒತ್ತಡ. ಇದೆಲ್ಲವೂ ಮಾನಸಿಕ ಒತ್ತಡಕ್ಕೆ ಕಾರಣ ಆಗುತ್ತದೆ. ಈ ಒತ್ತಡ ನಮ್ಮ ದೇಹ, ಮನಸ್ಸು, ಭಾವನೆ ಮತ್ತು ವರ್ತನೆಯ ಮೇಲೆ ಪರಿಣಾಮ ಬೀರಬಹುದು. ಸರಿಯಾದ ಸಮಯದಲ್ಲಿ ಇದರ ನಿರ್ವಹಣೆ ನಡೆಯದಿದ್ದರೆ, ಇದು ಹಲವು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು.
ಈ ಮಾನಸಿಕ ಒತ್ತಡ ಒಮ್ಮೊಮ್ಮೆ ಒಳ್ಳೆಯದಾಗಿಯೂ ಕಾರ್ಯನಿರ್ವಹಿಸಬಹುದು. ಕೆಲವು ಜನರಿಗೆ ಸ್ವಲ್ಪ ಒತ್ತಡ ಇದ್ದರಷ್ಟೇ ಕೆಲಸದ ಬಗ್ಗೆ ಗಮನ ಕೊಡುತ್ತಾರೆ. ಉದಾಹರಣೆಗೆ ಪರೀಕ್ಷೆ ಮುನ್ನ ಸ್ವಲ್ಪ ಒತ್ತಡ ಇದ್ದರೆ ನಾವು ಹೆಚ್ಚು ಗಮನಹರಿಸಿ ಓದಲು ಸಾಧ್ಯವಾಗುತ್ತದೆ. ಇಲ್ಲವಾದರೆ ಆಲಸ್ಯ ಕೂಡ ಹುಟ್ಟಿಕೊಳ್ಳುತ್ತದೆ. ಈ ಒತ್ತಡ ನಿಯಂತ್ರಣದ ಹೊರಗೆ ಹೋಗಿ ದೀರ್ಘಕಾಲ ಇರುತ್ತದೆ ಎಂದರೆ, ಅದು ಅಪಾಯಕಾರಿ ಆಗಬಹುದು.
ಮಾನಸಿಕ ಒತ್ತಡದ ಪ್ರಕಾರಗಳು:
1. ತಾತ್ಕಾಲಿಕ ಒತ್ತಡ (Acute Stress):
ತಕ್ಷಣದ ಸಂದರ್ಭಕ್ಕೆ ಪ್ರತಿಕ್ರಿಯೆ. ಉದಾಹರಣೆಗೆ, ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಕೊಂಡಾಗ ಉಂಟಾಗುವ ಒತ್ತಡ.
2. ಮಧ್ಯಮಾವಧಿಯ ಒತ್ತಡ (Episodic Acute Stress):
ಪದೇಪದೇ ತಾತ್ಕಾಲಿಕ ಒತ್ತಡವನ್ನು ಅನುಭವಿಸುವುದು. ಉದಾ: ಯಾವಾಗಲೂ ತಡವಾಗುವುದು, ಗೊಂದಲದಲ್ಲಿ ಇರುವವರು.
3. ದೀರ್ಘಕಾಲದ ಒತ್ತಡ (Chronic Stress):
ನಿರಂತರವಾಗಿ ಇರುವ ಒತ್ತಡ.
ಉದಾ: ನಿರುದ್ಯೋಗ, ನಿರಂತರ ವಿವಾದ, ದೀರ್ಘಕಾಲದ ಬಡತನ.
ಒತ್ತಡ ದೇಹದ ಮೇಲೆ ಬೀರುವ ಪರಿಣಾಮಗಳು:
1. ನರವ್ಯೂಹ ವ್ಯವಸ್ಥೆಯ ಮೇಲೆ ಪರಿಣಾಮ:
ಒತ್ತಡ ಆಗುತ್ತಿದ್ದಾಗ ದೇಹದಲ್ಲಿ "ಫೈಟ್-ಅರ್-ಫ್ಲೈಟ್" ಪ್ರತಿಕ್ರಿಯೆ ಸಕ್ರಿಯವಾಗುತ್ತದೆ. ಅಂದ್ರೆ, ಆಪತ್ತು ಎದುರಿಸಲು ದೇಹ ಸಜ್ಜಾಗುತ್ತದೆ. ಇದರ ಪರಿಣಾಮವಾಗಿ, ಹೃದಯದ ಪಂಪಿಂಗ್ ವೇಗ ಹೆಚ್ಚಾಗುತ್ತದೆ. ರಕ್ತದೊತ್ತಡ ಏರುತ್ತದೆ.
ಶರೀರದ ಎಲ್ಲ ಅಂಗಗಳಿಗೆ ಹೆಚ್ಚಿನ ಆಮ್ಲಜನಕ ಮತ್ತು ರಕ್ತ ಹರಿಯುವಂತೆ ಮಾಡುತ್ತದೆ
ಈ ಪ್ರತಿಕ್ರಿಯೆ ಯಾವಾಗಲೋ ಒಮ್ಮೆ ಕಾಣಿಸಿಕೊಂಡರೆ ತೊಂದರೆ ಇಲ್ಲ. ಆದರೆ ಈ ಪ್ರತಿಕ್ರಿಯೆ ನಿರಂತರವಾಗಿ ನಡೆಯುತ್ತಿದ್ದರೆ, ಅದು ನರವ್ಯೂಹ ವ್ಯವಸ್ಥೆ ಮೇಲೆ ದೋಷ ಉಂಟುಮಾಡುತ್ತದೆ.
2. ಹೃದಯದ ಆರೋಗ್ಯದ ಮೇಲೆ ಪರಿಣಾಮ:
ಉಲ್ಬಣಗೊಂಡ ರಕ್ತದೊತ್ತಡ, ಹೃದಯಾಘಾತದ ಅಪಾಯ. ಹೃದಯದಲ್ಲಿ ಅಸಾಧಾರಣ ಧ್ವನಿ ಅಥವಾ ಕಂಪನಗಳು.
3. ದೀರ್ಘಕಾಲದ ಅತಿಸಾರ.
ಜೀರ್ಣಕ್ರಿಯೆ ವ್ಯವಸ್ಥೆಯ ಮೇಲೆ ಒತ್ತಡ ನೇರವಾಗಿ ಪರಿಣಾಮ ಬೀರುತ್ತದೆ. ಹೊಟ್ಟೆ ಬಿಸುಕು, ಅತಿಸಾರ, ಹಸಿವು ಇಲ್ಲದಿದ್ದರೂ ಹಸಿವಿನ ಭಾವನೆ.
4. ತೊಂದರೆಗೊಂಡ ನಿದ್ರೆ (Sleep disorders):
ಮಲಗಲು ಆಗದೇ ಇರುವುದು, ಮಧ್ಯರಾತ್ರಿ ಎದ್ದು ಹೋಗುವುದು. ನಿದ್ದೆಗೆಟ್ಟತನದಿಂದ ಮುಂಜಾನೆ ಎಚ್ಚರಗೊಳ್ಳುವುದು.
5. ಮಾನಸಿಕ ಆರೋಗ್ಯದ ಮೇಲೆ ಪರಿಣಾಮ:
ಅಲ್ಪಮಾನಸಿಕತೆ, ಆತಂಕ (Anxiety), ಹತಾಶೆ (Depression) ಉಗ್ರತೆ ಅಥವಾ ಕೋಪ.
6.ರೋಗ ನಿರೋಧಕ ವ್ಯವಸ್ಥೆ ಮೇಲೆ ಪರಿಣಾಮ:
ಒತ್ತಡದಿಂದ ದೇಹದ ರೋಗ ಪ್ರತಿರೋಧ ಶಕ್ತಿ ಕಡಿಮೆಯಾಗುತ್ತದೆ. ಇದು ವಿವಿಧ ರೋಗಗಳಿಗೆ ಆಹ್ವಾನ ನೀಡಬಹುದು.
ಒತ್ತಡ ನಿಭಾಯಿಸುವ ಮಾರ್ಗಗಳು:
1. ಧ್ಯಾನ ಮತ್ತು ಯೋಗ:
- ಪ್ರತಿದಿನ ಕನಿಷ್ಠ 15 ನಿಮಿಷಗಳು ಯೋಗ ಅಥವಾ ಧ್ಯಾನ ಮಾಡಿದರೆ ಮನಸ್ಸು ಶಾಂತಿಯಾಗುತ್ತದೆ.
- "ಪ್ರಾಣಾಯಾಮ" ಶ್ವಾಸದ ನಿಯಂತ್ರಣದ ಮೂಲಕ ನರವ್ಯೂಹ ವ್ಯವಸ್ಥೆಯನ್ನು ಸಮತೋಲನಗೊಳಿಸುತ್ತದೆ.
2. ವ್ಯಾಯಾಮ:
- ದಿನವೂ ಕನಿಷ್ಠ 30 ನಿಮಿಷಗಳಷ್ಟು ನಡೆಯುವುದು, ಸೈಕ್ಲಿಂಗ್, ಈಜು, ಅಥವಾ ಜಾಗಿಂಗ್ ಮಾಡುವುದು.
- ವ್ಯಾಯಾಮ ದೇಹದಲ್ಲಿ ಎಂಡಾರ್ಫಿನ್ (ಅಂದರೆ ಹ್ಯಾಪಿ ಹಾರ್ಮೋನ್ಸ್) ಉತ್ಪತ್ತಿಯನ್ನು ಹೆಚ್ಚಿಸುತ್ತದೆ.
3. ಆಹಾರದ ಮಹತ್ವ:
- ಸಮತೋಲನಯುತ ಆಹಾರ ಸೇವನೆ.
- ಹೆಚ್ಚು ಕಾಫಿ ಅಥವಾ ಟೀ ಕುಡಿಯುವುದನ್ನು ಕಡಿಮೆ ಮಾಡುವುದು.
- ಸಕ್ಕರೆ ಮತ್ತು ತೈಲವಸ್ತುಗಳ ಪ್ರಮಾಣ ನಿಯಂತ್ರಣ.
4. ನಿದ್ರೆ ಸರಿಯಾಗಿ ಪಡೆಯುವುದು:
- ದಿನದ ಕೊನೆಯ 30 ನಿಮಿಷ ಮೊಬೈಲ್, ಟಿವಿ ನೋಡದೇ ಮೌನದಿಂದ ಕಾಲ ಕಳೆಯುವುದು
- ನಿದ್ರೆಗೆಂದು ನಿಶ್ಚಿತ ಸಮಯದಲ್ಲಿ ಮಲಗುವುದು ಮತ್ತು ಎದ್ದೇಳುವ ಅಭ್ಯಾಸ ಮಾಡಿಕೊಳ್ಳುವುದು.
5. ಸಮಯ ನಿರ್ವಹಣೆ:
- ಕೆಲಸಗಳು ಹಾಗೂ ಜವಾಬ್ದಾರಿಗಳನ್ನು ಸರಿಯಾಗಿ ಪಟ್ಟಿ ಮಾಡುವುದು. ಅತಿಯಾದ ಕೆಲಸಗಳನ್ನು ತಾವು ಮಾತ್ರ ಮಾಡಬೇಕು ಎಂಬ ಭಾವನೆಯಿಂದ ದೂರ ಇರಬೇಕು.
- ‘ಇಲ್ಲ’ ಎಂದು ಹೇಳುವ ಮಾತಿನ ಕಲೆಯನ್ನು ಬೆಳೆಸುವುದು.
6. ಸಕಾರಾತ್ಮಕ ಚಿಂತನೆ ಮತ್ತು ಧರ್ಮ
- ಪ್ರತಿದಿನ ಧನ್ಯತೆಯ ಭಾವನೆಯೊಂದಿಗೆ ದಿನಚರಿಯನ್ನು ಆರಂಭಿಸಿ.
- ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು.
- ಮನಸ್ಸಿಗೆ ಶಾಂತಿ ನೀಡುವ ಭಕ್ತಿ ಗೀತೆ ಅಥವಾ ಮಂತ್ರಗಳನ್ನು ಕೇಳುವುದು.
7. ಸ್ನೇಹಿತರ ಜೊತೆ ಮಾತನಾಡುವುದು:
- ಒತ್ತಡ ಬರುವ ವೇಳೆ ಯಾರಾದರೂ ನಂಬಿದವರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವುದು.
- ಒಂದೇ ಸಮಸ್ಯೆಯನ್ನು ಮನಸ್ಸಿನಲ್ಲಿಟ್ಟು ಕುಳಿತುಕೊಳ್ಳಬಾರದು.
8. ಮಾನಸಿಕ ಆರೋಗ್ಯದ ತಜ್ಞರನ್ನು ಸಂಪರ್ಕಿಸುವುದು:
- ಒತ್ತಡ ನಿಯಂತ್ರಣಕ್ಕೆ ಕೌನ್ಸೆಲಿಂಗ್ ತಜ್ಞರನ್ನು ಸಂಪರ್ಕಿಸಬಹುದು
- ಔಷಧೋಪಚಾರ ಅಥವಾ ನಡವಳಿಕೆ ತಿದ್ದುಪಡಿ ಚಿಕಿತ್ಸೆಗಳು ಸಹ ಲಭ್ಯವಿವೆ
ಮಕ್ಕಳಲ್ಲಿ ಒತ್ತಡ ಹೇಗೆ ಕಾಣಿಸುತ್ತದೆ?
- ಹೆಚ್ಚು ಅಳುವುದು ಅಥವಾ ಜೋರಾಗಿ ಜಗಳವಾಡುವುದು.
- ಹೊಟ್ಟೆ ನೋವು ಅಥವಾ ತಲೆನೋವು ಹೇಳುವುದು.
- ಶಾಲಾ ಅಭ್ಯಾಸಗಳಲ್ಲಿ ಆಸಕ್ತಿ ಕಡಿಮೆಯಾಗುವುದು.
- ಶಾಲಾ ಪರೀಕ್ಷೆಗೆ ಒತ್ತಡ ಬಂದಾಗ, ವಿದ್ಯಾರ್ಥಿಗೆ ತಲೆನೋವು, ಹೊಟ್ಟೆ ನೋವು ಆಗಬಹುದು.
- ಈ ಲಕ್ಷಣಗಳನ್ನು ಆದಷ್ಟು ಬೇಗನೆ ಗುರುತಿಸಿ, ಪೋಷಕರು ಸಹಾಯ ಮಾಡುವುದು ಅಗತ್ಯ.
ಕ್ಲಿಷ್ಟಕರ ಸಂದರ್ಭದಲ್ಲಿ ಪ್ರೇರಣೆ ನೀಡುವ ಚಟುವಟಿಕೆಗಳು:
- ನಿಮ್ಮ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ (ಹಾಡುವುದು, ಲೇಖನ ಬರೆಯುವುದು, ಚಿತ್ರಕಲೆ ಇತ್ಯಾದಿ…)
- ಪ್ರಕೃತಿಯ ನಡುವೆ ಸಮಯ ಕಳೆಯಿರಿ.
- ಕನಿಷ್ಠ ಒಂದು ದಿನ ಡಿಜಿಟಲ್ ಡಿಟಾಕ್ಸ್ (ಮೊಬೈಲ್, ಲ್ಯಾಪ್‌ಟಾಪ್ ನಿಂದ ದೂರ) ಮಾಡಬೇಕು.
ಮಾನಸಿಕ ಒತ್ತಡ ನಂಬಲಾಗದಷ್ಟು ಸಾಮಾನ್ಯವಾದ ಸಮಸ್ಯೆಯಾದರೂ, ಅದನ್ನು ನಿರ್ಲಕ್ಷ್ಯ ಮಾಡಿದರೆ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯದ ಮೇಲೆ ಬಹುಪಾಲು ಕೆಡುಕನ್ನುಂಟುಮಾಡುತ್ತದೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕೆಲಮಟ್ಟಿಗೆ ಒತ್ತಡ ಅನುಭವಿಸುತ್ತಾರೆ. ಆದರೆ ಪ್ರಮುಖವಾದುದು ಅದನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದು. ಸರಿಯಾದ ಆಹಾರ, ನಿದ್ರೆ, ವ್ಯಾಯಾಮ, ಧ್ಯಾನ ಮತ್ತು ಸಮರ್ಥ ಸಮಯ ನಿರ್ವಹಣೆಯಿಂದ ನಾವು ಒತ್ತಡವನ್ನು ಕಡಿಮೆ ಮಾಡಬಹುದು.
.jpeg)
.jpeg)
.jpeg)
.jpeg)
.jpeg)
.jpeg)
No comments:
Post a Comment